ಇಮಾ ಕೇಥಲ್ (ಅಮ್ಮಂದಿರ ಮಾರುಕಟ್ಟೆ) (ಇಮಾ ಮಾರುಕಟ್ಟೆ ಅಥವಾ ನೂಪಿ ಕೇಥಲ್ ಎಂದೂ ಪರಿಚಿತವಾಗಿದೆ) ಮಣಿಪುರ ರಾಜ್ಯದ ಇಂಫಾಲದಲ್ಲಿರುವ ಕೇವಲ ಮಹಿಳೆಯರು ನಡೆಸುವ ಒಂದು ಮಾರುಕಟ್ಟೆಯಾಗಿದೆ. ಇದು ಮಣಿಪುರ ರಾಜ್ಯದಲ್ಲಿ ಒಂದು ವಾಣಿಜ್ಯ ಕೇಂದ್ರ ಮತ್ತು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದು ತನ್ನ ಸ್ಥಳವನ್ನು ಇಂಫಾಲ್ ನಗರದೊಳಗೆ ಬದಲಾಯಿಸಿದೆ ಮತ್ತು ಪ್ರಸಕ್ತವಾಗಿ ಖವೈರಾಬಂದ್ ಬಜ಼ಾರ್‌ನಲ್ಲಿ ಸ್ಥಿತವಾಗಿದೆ. ಇದನ್ನು ೧೬ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು ವಿವಿಧ ಉತ್ಪನ್ನಗಳನ್ನು ಮಾರುವ ಸುಮಾರು ೫,೦೦೦-೬,೦೦೦ ಮಹಿಳಾ ಮಾರಾಟಗಾರರನ್ನು ಹೊಂದಿದೆ. ಈ ಮಾರುಕಟ್ಟೆಯಲ್ಲಿ ತರಕಾರಿಗಳು, ಹಣ್ಣುಗಳು, ವಸ್ತ್ರಗಳು, ಆಟಿಕೆಗಳು, ಮೀನು, ಸಂಬಾರ ಪದಾರ್ಥಗಳು ಮತ್ತು ಪಾತ್ರೆಪಡಗಗಳಂತಹ ಉತ್ಪನ್ನಗಳು ಲಭ್ಯವಿವೆ. ಇದು ಏಷ್ಯಾದಲ್ಲಿನ ಅತಿ ದೊಡ್ಡ ಮಹಿಳಾ ಮಾರುಕಟ್ಟೆಯಾಗಿದೆ. == ಉಲ್ಲೇಖಗಳು ==